ಅಭಿಪ್ರಾಯ / ಸಲಹೆಗಳು

ಸ್ಥಾಪನೆ ಮತ್ತು ಪರಿಚಯ

ಸ್ಥಾಪನೆ ಮತ್ತು ಪರಿಚಯ :

ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ಸಂಸ್ಥೆಯು, ಸರ್ಕಾರದ ಆದೇಶ ಸಂಖ್ಯೆ ಆಕುಕ 44 ಎಂಎಂಸಿ 2016 ಬೆಂಗಳೂರು ದಿನಾಂಕ : 05.12.2016 ರ ರೀತ್ಯ ಸ್ಥಾಪಿತವಾಗಿದ್ದು, ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮಗಳು 1960ರ ಮೇರೆಗೆ ನೋಂದಣಿ ಸಂಖ್ಯೆ – ಡಿಆರ್ ಬಿ-2/ಎಸ್ಒಆರ್ಐ/54/2017-18, ದಿನಾಂಕ : 20.05.2017 ರಂದು ನೋಂದಾಯಿಸಲ್ಪಟ್ಟ ಸ್ವಾಯತ್ತ ಸಂಸ್ಥೆಯಾಗಿದೆ.  ಸಂಸ್ಥೆಯು ಮೆಡಿಕಲ್ ಗ್ಯಾಸ್ಟ್ರೋಎಂಟ್ರಾಲಜಿ ಹಾಗೂ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಜಿ ಖಾಯಿಲೆಗಳಿಂದ ಬಳಲುವ ರೋಗಿಗಳಿಗೆ ಉನ್ನತ ಮಟ್ಟದ ಚಿಕಿತ್ಸೆ, ಉದರ ಶಸ್ತ್ರಚಿಕಿತ್ಸಾ ಸೇವೆ ಮತ್ತು ಲಿವರ್ ಅಂಗಾಂಗ ಕಸಿ ಜರುಗಿಸುವುದು ಮೂಲ ಉದ್ದೇಶ ಹೊಂದಿದೆ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್ ಗಳಾದ ಡಿಎಂ ಮೆಡಿಕಲ್ ಗ್ಯಾಸ್ಟ್ರೋಎಂಟ್ರಾಲಜಿ ಮತ್ತು ಎಂ.ಸಿ.ಹೆಚ್ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಜಿ ಹಾಗೂ ಇತರೆ ಕೋರ್ಸ್ ಗಳನ್ನು ಜರುಗಿಸುವುದು ಇದರೊಂದಿಗೆ, ರೋಗಿಗಳಿಗೆ ಸಂಬಂಧಿಸಿದ ಸಂಶೋಧನಾ ಜರುಗಿಸುವ   ಉದ್ದೇಶ ಹೊಂದಿರುವ ದೇಶದಲ್ಲಿಯೇ ಪ್ರಥಮ ಸ್ವಾಯತ್ತ ಸಂಸ್ಥೆ.

 ಸರ್ಕಾರದ ಆದೇಶ ಸಂಖ್ಯೆ ಆಕುಕ 180  ಎಂಎಂಸಿ 2016, ದಿನಾಂಕ : 29.06.2016 ರಲ್ಲಿ ಆದೇಶಿಸಿರುವಂತೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಖಾಲಿಯಿದ್ದ, ಪ್ರಸ್ತುತ ಹಳೆ ನರ್ಸಿಂಗ್ ಶಾಲೆ ಕಟ್ಟಡವನ್ನು ದಿನಾಂಕ : 30.06.2017 ರಂದು ನಿರ್ದೇಶಕರು ಹಾಗೂ ಡೀನ್, ಬೆಂಗಳೂರು ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯು ಹಸ್ತಾಂತರಿಸಿದೆ.  ಈ ಕಟ್ಟಡವನ್ನು ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ಸಂಸ್ಥೆಯನ್ನಾಗಿ ಮಾರ್ಪಾಟು ಮಾಡುವ ಕಾಮಗಾರಿಯು ಪೂರ್ಣಗೊಂಡಿದ್ದು, ಸಾರ್ವಜನಿಕ ಸೇವೆಗಾಗಿ ಸ್ಥಾಪಿತಗೊಂಡಿದೆ.

ಪ್ರಮುಖ ಕರ್ತವ್ಯಗಳು :
(1) ಗ್ಯಾಸ್ಟ್ರೋಎಂಟ್ರಾಲಜಿ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಒಂದು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸ್ಥಾಪಿಸಿ, ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುವುದು.
(2) ಗ್ಯಾಸ್ಟ್ರೋಎಂಟ್ರಾಲಜಿಗೆ ಸಂಬಂಧಿಸಿದ ಖಾಯಿಲೆಗಳನ್ನು ಹೊಂದಿರುವ ರೋಗಿಗಳಿಗೆ ಮುಂದುವರಿದ ಸಮರ್ಪಕ ಚಿಕಿತ್ಸೆ ಒದಗಿಸುವುದು.
(3) ಗ್ಯಾಸ್ಟ್ರೋಎಂಟ್ರಾಲಜಿ ವೈದ್ಯ ವಿಜ್ಞಾನ ಕ್ಷೇತ್ರದಲ್ಲಿನ ಖಾಯಿಲೆಗಳ ಬಗ್ಗೆ ತರಬೇತಿ, ಸಂಶೋಧನೆ, ರೋಗ ವಿದ್ಯಾಭ್ಯಾಸ, ರೋಗ ನಿರ್ಧಾರ, ಚಿಕಿತ್ಸೆಗಳಿಗೆ ನೆರವು ಮತ್ತು ಉತ್ತೇಜನ ನೀಡುವುದು.

(4) ಗ್ಯಾಸ್ಟ್ರೋಎಂಟ್ರಾಲಜಿ ಖಾಯಿಲೆಗಳಾದ ಉದರರೋಗ ಹಾಗೂ ಅಂಗಾಂಗ ಕಸಿ (ಜೋಡಣೆ) ನೆರವೇರಿಸುವುದು.
(5) ಈ ಸಂಸ್ಥೆಗೆ ರಾಜ್ಯದ ಜಿಲ್ಲಾ ಆಸ್ಪತ್ರೆ, ಆರೋಗ್ಯ ಕೇಂದ್ರಗಳಿಂದ ಈ ಸಂಬಂಧ ಖಾಯಿಲೆ ಇರುವ ರೋಗಿಗಳಿಗೆ ತಪಾಸಣೆ ಜರುಗಿಸಿ ರೋಗಿಗಳ ಚಿಕಿತ್ಸೆ ಹಾಗೂ ಆರೋಗ್ಯ ಶಿಕ್ಷಣ ಒದಗಿಸುವುದು.
(6) ವೈಜ್ಞಾನಿಕ ಸಭೆಗಳು, ವಿಚಾರ ಸಂಕೀರ್ಣಗಳು, ಗೋಷ್ಠಿ, ಕಾರ್ಯಾಗಾರ, ಸ್ನಾತಕೋತ್ತರ ಶಿಕ್ಷಣ ನೀಡುವುದು.

 

ಇತ್ತೀಚಿನ ನವೀಕರಣ​ : 27-04-2021 03:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080